ಲಿಂಗವಿಲ್ಲದೆ ನಡೆವನ, ಲಿಂಗವಿಲ್ಲದೆ ನುಡಿವನ,
ಲಿಂಗವಿಲ್ಲದವನಂಗ ಸೂತಕ.
ಲಿಂಗಾಂಗಿ, ಲೌಕಿಕವ ಮುಟ್ಟಲಾಗದು.
ಲಿಂಗವಿಲ್ಲದೆ ಗಮಿಸಿದಡೆ ಆ ನಡೆನುಡಿಗೊಮ್ಮೆ ಪಾತಕ.
ಲಿಂಗವಿಲ್ಲದೆ ನುಡಿವ ಶಬ್ದವ ಕೇಳಲಾಗದು, ಶಿವಶಿವಾ!
ಲಿಂಗವಿಲ್ಲದೆ ಉಗುಳು ನುಂಗಿದರೆ ಕಿಲ್ಬಿಷ,
ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Liṅgavillade naḍevana, liṅgavillade nuḍivana,
liṅgavilladavanaṅga sūtaka.
Liṅgāṅgi, laukikava muṭṭalāgadu.
Liṅgavillade gamisidaḍe ā naḍenuḍigom'me pātaka.
Liṅgavillade nuḍiva śabdava kēḷalāgadu, śivaśivā!
Liṅgavillade uguḷu nuṅgidare kilbiṣa,
kūḍalacennasaṅgamadēvā.
ಸ್ಥಲ -
ಮಾಹೇಶ್ವರನ ಪ್ರಸಾದಿಸ್ಥಲ