Index   ವಚನ - 212    Search  
 
ಗುರುವಾದಡೂ ಆಗಲಿ, ಲಿಂಗವಾದಡೆಯೂ ಆಗಲಿ, ಜಂಗಮವಾದಡೆಯೂ ಆಗಲಿ ಪಾದೋದಕ ಪ್ರಸಾದವಿಲ್ಲದ ಪಾಪಿಯ ಮುಖವ ತೋರಿಸದಿರಯ್ಯಾ. ಭವಭಾರಿ ಜೀವಿಯ ಮುಖವ ತೋರಿಸದಿರಯ್ಯಾ. ಅವರ ನಡೆವೊಂದು ನುಡಿಯೊಂದು. ಹಿರಿಯತನಕ್ಕೆ ಬೆಬ್ಬನೆ ಬೆರತು ಉದರವ ಹೊರೆದುಕೊಂಡಿಹ ಕ್ರೂರಕರ್ಮಿಯ ಮುಖವ ತೋರಿಸದಿರಯ್ಯಾ, ಕೂಡಲಚೆನ್ನಸಂಗಯ್ಯಾ.