ಆರ ಮನೆಯ ಕೂಳನಾದರೆಯೂ ತಂದು,
ಒಡಲ ಕುದಿಹಕ್ಕೆ ಲಿಂಗಾರ್ಪಿತವ ಮಾಡಿದರೆ
ಅದು ಲಿಂಗಾರ್ಪಿತವಹುದೆ?
ಅಲ್ಲ, ಅದು ಅನರ್ಪಿತ.
"ಅರ್ಪಿತಂ ಚ ಗುರೋರ್ವಾಕ್ಯಾತ್ಕಿಲ್ಬಿಷಂ ಸ್ಯಾದನರ್ಪಿತಂ|
ಯದ್ಯನರ್ಪಿತಂ ಭುಂಜೀಯಾತ್ ರೌರವಂ ನರಕಂ ವ್ರಜೇತ್"||
ತನುಸಾಹಿತ್ಯ ಮನಸಾಹಿತ್ಯ ಧನಸಾಹಿತ್ಯ
ಲಿಂಗಸಾಹಿತ್ಯ ಪ್ರಸಾದಸಾಹಿತ್ಯವಾದ ಕಾರಣ,
ಕೂಡಲಚೆನ್ನಸಂಗಮದೇವರಲ್ಲಿ
ಈ ಅನುವ ಬಸವಣ್ಣ ತೋರಿದನಾಗಿ,
ಆನು ಬದುಕಿದೆನು.