Index   ವಚನ - 226    Search  
 
ಭೂಮಿಗೆ ಕೆಸರುಗಲ್ಲನಿಕ್ಕಿ, ಮೇರುವ ಸ್ಥಳಗೊಳಿಸಿ, ಅಂಡಜ ಉತ್ಪತ್ಯವಾದ ಬಳಿಕ ಹಿರಿಯರನಾರುವ ಕಾಣೆ. ನರೆತೆರೆಗಳು ತೋರಿದವರು ಹಿರಿಯರೆಂಬೆನೆ? ಎನ್ನೆನು. ಮತಿಗೆಟ್ಟು ಒಂದನಾಡಹೋಗಿ ಒಂಬತ್ತನಾಡುತ್ತಿದ್ದರೆ ಹಿರಿಯರೆಂಬೆನೆ? ಎನ್ನೆನು. ಕೂಡಲಚೆನ್ನಸಂಗಮದೇವರಲ್ಲಿ ಹಿರಿಯತನದ ತೆರನ ಚೀಲಾಳ ಬಲ್ಲ.