Index   ವಚನ - 228    Search  
 
ಕುಲವನರಿದೆವೆಂಬರು, ಆದಿಯ ಕುಲವನರಿಯದ ಕಾರಣ ವ್ಯಾಕುಲಗೊಂಡಿತ್ತು ತ್ರೈಜಗ ನೋಡಾ. ಕುಲವಲ್ಲಾ ಹೊನ್ನು? ಕುಲವಲ್ಲಾ ಹೆಣ್ಣು? ಕುಲವಲ್ಲಾ ಮಣ್ಣು? "ಆದಿಬಿಂದುರ್ಭವೇದ್ಬೀಜಂ ಬೀಜಮಧ್ಯಸ್ಥಿತಂ ಕುಲಮ್| ಬೀಜಂ ನಾಸ್ತಿ ಕುಲಂ ನಾಸ್ತಿ ತಸ್ಮೈ ಶಿವಕುಲಂ ಭವೇತ್"|| ಎಂದುದಾಗಿ, ಹೊನ್ನು ಹೆಣ್ಣು ಮಣ್ಣು ತ್ರಿವಿಧವನತಿಗಳೆದು ನಿರಾಕುಲನಾದ ಬಳಿಕ ಕುಲಂ ನಾಸ್ತಿ, ಕೂಡಲಚೆನ್ನಸಂಗಮದೇವಾ.