Index   ವಚನ - 241    Search  
 
ಅಧರ ತಾಗುವ ರುಚಿಯನು, ಉದರ ತಾಗುವ ಸುಖವನು, ಲಿಂಗಾರ್ಪಿತವ ಮಾಡದಿದ್ದರೆ ಕೃತಕಿಲ್ಬಿಷ ನೋಡಾ. ಶ್ರೋತ್ರ ನೇತ್ರ ಭುಂಜನೆಯ ಮಾಡಲಾಗದು. ತಟ್ಟಿತ್ತು ಮುಟ್ಟಿತ್ತು ಲಿಂಗಾರ್ಪಿತವೆಂದರೆ, ಅವನಂದೇ ವ್ರತಗೇಡಿ ಕೂಡಲಚೆನ್ನಸಂಗಮದೇವಾ.