Index   ವಚನ - 248    Search  
 
ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಥಲವನರಿದೆಹೆವೆಂದರೆ ಮತ್ತಾರಿಗೂ ಆಗದು. ಸಾಧಿಸುವ ಸಾಧಕಂಗಲ್ಲದೆ ಮತ್ತಾರಿಗೂ ಆಗದು. ಭೇದಿಸುವ ಭೇದಕಂಗಲ್ಲದೆ ಮತ್ತಾರಿಗೂ ಆಗದು. ಪ್ರಸಾದಿಯ ಪ್ರಸಾದ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗಲ್ಲದೆ ಮತ್ತಾರಿಗೂ ಆಗದು.