Index   ವಚನ - 250    Search  
 
ಧನವ ಮರೆದು ಮಾಡಿದರೆ ಜಂಗಮರೂಪವಾಗಲೇಬೇಕು, ಮನವ ಮರೆದು ಮಾಡಿದರೆ ಲಿಂಗರೂಪವಾಗಲೇಬೇಕು, ತನುವ ಮರೆದು ಮಾಡಿದರೆ ಪ್ರಸಾದರೂಪವಾಗಲೇಬೇಕು. ಇಂತಿವ ಮರೆದು ಮಾಡಿದರೆ ಬಯಲಲೊದಗಿದ ಘಟ್ಟಿಯಂತಿರಬೇಕು. ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗಲ್ಲದೆ ಇಲ್ಲ ನೋಡಯ್ಯಾ.