Index   ವಚನ - 251    Search  
 
ಗುರುಸಾಧಕರ ಕಾಣೆನಯ್ಯ, ಬಲ್ಲೆನೆಂಬರು ಹೊಲಬುಗೆಟ್ಟರು. ಲಿಂಗಸಾಧಕರ ಕಾಣೆನಯ್ಯ, ಬಲ್ಲೆನೆಂಬರು ಹೊಲಬುಗೆಟ್ಟರು. ಜಂಗಮಸಾಧಕರ ಕಾಣೆನಯ್ಯ, ಬಲ್ಲೆನೆಂಬರು ಹೊಲಬುಗೆಟ್ಟರು. ಪಾದೋದಕ ಪ್ರಸಾದ ಉಭಯದಲ್ಲಿ ನಿಂದ ಕಾರಣ ಕೂಡಲಚೆನ್ನಸಂಗಯ್ಯಾ, ಈ ವಚನಸಾಧಕರ ಕಂಡು ಮನ ನಾಚಿತ್ತು.