Index   ವಚನ - 265    Search  
 
ಲೋಕದ ಹೊಲೆ ಉದಕದಿಂದ ಹೋಹುದೆಂಬಿರಿ, ಉದಕದ ಹೊಲೆ ಏತರಿಂದ ಹೋಹುದು? ವಾಕು ಪ್ರಮಾಣಿನಿಂದ ಅಗ್ಛವಣಿಯೆನಿಸಿತ್ತು. ಸಾಹಿತ್ಯವರಿದು ಕೊಳಬಲ್ಲ ಚೆನ್ನನ ಪ್ರಸಾದ ಲಿಂಗಕ್ಕೆ ಓಗರವಾಯಿತ್ತು ಕೂಡಲಚೆನ್ನಸಂಗಮದೇವಾ.