Index   ವಚನ - 277    Search  
 
ರೂಪ-ಕುರೂಪ, ಗಂಧ-ದುರ್ಗಂಧ, ರಸ-ನಿರಸ, ಪರುಶ-ಅಪರುಶ, ಶಬ್ದ-ನಿಃಶಬ್ದ, ಲಿಂಗಮುಖಕ್ಕೆ ಬಾರದುದು ಕಿಲ್ಬಿಷವಯ್ಯಾ. ಕೂಡಲಚೆನ್ನಸಂಗಾ ನಿಮ್ಮತ್ತ ಮುಂತಾದಲ್ಲವೆ ಎನ್ನತ್ತ ಮುಂತಾಗದು.