ಶಿಷ್ಯನ ಪೂರ್ವಾಶ್ರಯವ
ಗುರು ಕಳೆದನೆಂಬರು,
ಆ ನುಡಿಯ ಕೇಳಲಾಗದು.
ಗುರುವಿನ ಪೂರ್ವಾಶ್ರಯವ
ಶಿಷ್ಯ ಕಳೆವನಲ್ಲದೆ,
ಶಿಷ್ಯನ ಪೂರ್ವಾಶ್ರಯವ
ಗುರು ಕಳೆಯಲರಿಯ.
ಶರಣನ ಪೂರ್ವಾಶ್ರಯವ
ಲಿಂಗ ಕಳೆಯಿತ್ತೆಂಬರು,
ಆ ನುಡಿಯ ಕೇಳಲಾಗದು.
ಲಿಂಗದ ಪೂರ್ವಾಶ್ರಯವ
ಶರಣ ಕಳೆವನಲ್ಲದೆ,
ಆ ಶರಣನ ಪೂರ್ವಾಶ್ರಯವ
ಲಿಂಗವು ಕಳೆಯಲರಿಯದು.
ಭಕ್ತನ ಪೂರ್ವಾಶ್ರಯವ
ಜಂಗಮ ಕಳೆಯಿತ್ತೆಂಬರು
ಆ ನುಡಿಯ ಕೇಳಲಾಗದು.
ಜಂಗಮದ ಪೂರ್ವಾಶ್ರಯವ
ಭಕ್ತ ಕಳೆವನಲ್ಲದೆ,
ಆ ಭಕ್ತನ ಪೂರ್ವಾಶ್ರಯವ
ಜಂಗಮ ಕಳೆಯಲರಿಯ.
ಪ್ರಸಾದಿಯ ಪೂರ್ವಾಶ್ರಯವ
ಪ್ರಸಾದ ಕಳೆಯಿತ್ತೆಂಬರು
ಆ ನುಡಿಯ ಕೇಳಲಾಗದು,
ಪ್ರಸಾದದ ಪೂರ್ವಾಶ್ರಯವ
ಪ್ರಸಾದಿ ಕಳೆವನಲ್ಲದೆ
ಆ ಪ್ರಸಾದಿಯ ಪೂರ್ವಾಶ್ರಯವ
ಪ್ರಸಾದ ಕಳೆಯಲರಿಯದು.
ಆ ಪ್ರಸಾದದ ಪೂರ್ವಾಶ್ರಯವ ಕಳೆಯಲಿಕಾಗಿ
ಮಹಾಪ್ರಸಾದಿಯಾದ
ಕೂಡಲಚೆನ್ನಸಂಗಾ ನಿಮ್ಮ ಶರಣ.
Art
Manuscript
Music
Courtesy:
Transliteration
Śiṣyana pūrvāśrayava
guru kaḷedanembaru,
ā nuḍiya kēḷalāgadu.
Guruvina pūrvāśrayava
śiṣya kaḷevanallade,
śiṣyana pūrvāśrayava
guru kaḷeyalariya.
Śaraṇana pūrvāśrayava
liṅga kaḷeyittembaru,
ā nuḍiya kēḷalāgadu.
Liṅgada pūrvāśrayava
śaraṇa kaḷevanallade,
ā śaraṇana pūrvāśrayava
liṅgavu kaḷeyalariyadu.
Bhaktana pūrvāśrayava
jaṅgama kaḷeyittembaru
Ā nuḍiya kēḷalāgadu.
Jaṅgamada pūrvāśrayava
bhakta kaḷevanallade,
ā bhaktana pūrvāśrayava
jaṅgama kaḷeyalariya.
Prasādiya pūrvāśrayava
prasāda kaḷeyittembaru
ā nuḍiya kēḷalāgadu,
prasādada pūrvāśrayava
prasādi kaḷevanallade
ā prasādiya pūrvāśrayava
prasāda kaḷeyalariyadu.
Ā prasādada pūrvāśrayava kaḷeyalikāgi
mahāprasādiyāda
kūḍalacennasaṅgā nim'ma śaraṇa.