Index   ವಚನ - 296    Search  
 
ಕ್ರೀಯಿಲ್ಲದೆ ನಿಃಕ್ರೀಯಲ್ಲಿ ನಡೆಯಲೆಂತುಬಹುದು? ಸೀಮೆಯಿಲ್ಲದೆ ನಿಸ್ಸೀಮೆಯಲ್ಲಿ ನಡೆಯಲೆಂತುಬಹುದು? ಮೊದಲಿಲ್ಲದೆ ಲಾಭವನರಸಬಹುದೆ? ಹರಿವ ಮನವ ನಿಲ್ಲೆಂದು ನಿಲಿಸಿ, ಜಿಹ್ವೆಯ ಭುಂಜಕತನವ ಕಳೆದು, ಲಿಂಗಭೋಗೋಪಭೋಗಿಯಾದಲ್ಲದೆ ಮೆಚ್ಚುವನೆ ಕೂಡಲಚೆನ್ನಸಂಗಾ ನಿಮ್ಮ ಶರಣ?