ಉದಯಮುಖದಲ್ಲಿ ಹುಟ್ಟಿದ ಬಿಸಿಲ
ಲಿಂಗಾರ್ಪಿತವ ಮಾಡಬೇಕು.
ಅಸ್ತಮಾನ ಮುಖದಲ್ಲಿ ಹುಟ್ಟಿದ ನೆಳಲ
ಲಿಂಗಾರ್ಪಿತವ ಮಾಡಬೇಕು.
ಅಧ ಊರ್ಧ್ವ ಮಧ್ಯವನು
ಲಿಂಗಾರ್ಪಿತವ ಮಾಡಬೇಕು.
ಅಂಬರಮುಖದಲ್ಲಿ ಹುಟ್ಟಿದ
ನಿರ್ಮಳೋದಕವನು ಲಿಂಗಾರ್ಪಿತವ ಮಾಡಬೇಕು.
ಬಯಲಮುಖದಲ್ಲಿ ಹುಟ್ಟಿದ ವಾಯುವನು
ಲಿಂಗಾರ್ಪಿತವ ಮಾಡಬೇಕು.
ಆವ ಪದಾರ್ಥವಾದರೇನು
ಲಿಂಗಾರ್ಪಿತವ ಮಾಡಬೇಕು.
ಕೂಡಲಚೆನ್ನಸಂಗಯ್ಯಾ
ಲಿಂಗಾರ್ಪಿತವಲ್ಲದೆ ಕೊಂಡರೆ ಕಿಲ್ಬಿಷವೆಂಬುದು.