Index   ವಚನ - 298    Search  
 
ಎಂತೆನಗೆ ತೃಷ್ಣೆ ಅಂತೆ ಲಿಂಗಪರುಶನ ಮಾಡುವೆ ನಾನಯ್ಯಾ, ಎಂತೆನಗೆ ತೃಷ್ಣೆ ಅಂತೆ ಜಂಗಮದರುಶನ ಮಾಡುವೆ ನಾನಯ್ಯಾ, ಎಂತೆನಗೆ ತೃಷ್ಣೆ ಅಂತೆ ಪ್ರಸಾದದ ಸವಿಯ ಸವಿವೆ ನಾನಯ್ಯಾ. ತ್ರಿವಿಧದಲ್ಲಿ ಸಂಗವಾಗಿ, ಅಂಗಭೋಗವ ಭಂಗಿಸಿ ಕಳೆದು, ಲೋಕ ಲೌಕಿಕವ ವಿವರಿಸಿ ಕಳೆದು ಬಸವನ ಅಂಗ ತಾವಾದೆವೆಂಬ ತೃಷ್ಣೆ ಹಿರಿದು, ಕೂಡಲಚೆನ್ನಸಂಗಯ್ಯಾ, ಕ್ರಮವರಿಯೆ.