Index   ವಚನ - 299    Search  
 
ಎಡೆಗೊಡುವನಲ್ಲ, ಎಡೆಗೊಂಬವನಲ್ಲ, ನುಡಿ ಎಡೆಯೊಳಗೆ ಮರಳುವನಲ್ಲ, ತನ್ನ ತಾನು ಮಹಾಪ್ರಸಾದಿ. ಎಡೆಯಲ್ಲಿ ಅಂಧಃಕಾರ ರೂಪನಲ್ಲ. ಇದು ಕಾರಣ, ಕೂಡಲಚೆನ್ನಸಂಗಯ್ಯಾ ಇದ್ದುದನರ್ಪಿಸಬಲ್ಲನಾಗಿ ಮಹಾಪ್ರಸಾದಿ.