Index   ವಚನ - 306    Search  
 
ಕ್ಷೀರವ ಸೋಂಕಿದ ಜಲವ ಬೇರೆ ಮಾಡಬಹುದೇ? ಪರಿಮಳವ ಸೋಂಕಿದ ವಾಯುವ ವಿವರಿಸಲುಂಟೆ? "ಉತ್ತಮಂ ಏಕಭುಕ್ತಂ ಚ ಮಧ್ಯಮಂ ದ್ವಯಸ್ವೀಕೃತಮ್| ಕನಿಷ್ಠೋನsರ್ಪಿತಶ್ಚೈವ ಪ್ರಸಾದೋ ನಿಷ್ಫಲೋ ಭವೇತ್"|| ಎಂದುದಾಗಿ, ನಿರೂಪಿಂಗೆ ರೂಪಾರ್ಪಣೆಯ ಮಾಡಿ, ರುಚಿ ಪರಿಮಳ ಭಾವದತ್ತಲು ಅವಧಾನಿಯಾಗಿಪ್ಪ ನಿಮ್ಮ ಶರಣ. ಬೇರೆ ಮತ್ತೆ ವ್ಯವಧಾನವಿಲ್ಲದಂತಿಪ್ಪ ಕಾಣಾ, ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿ.