Index   ವಚನ - 342    Search  
 
ಅಂಗಸಂಗಿಯಾದವಂಗೆ ಲಿಂಗಸಂಗವಿಲ್ಲ, ಲಿಂಗಸಂಗಿಯಾದವಂಗೆ ಅಂಗಸಂಗವಿಲ್ಲ. ಅಂಗಸಂಗವೆಂಬುದು ಅನಾಚಾರ, ಲಿಂಗಸಂಗವೆಂಬುದು ಸದಾಚಾರ. ಇದು ಕಾರಣ, ಅಂಗಸಂಗವ ಬಿಟ್ಟು ಲಿಂಗಸಂಗಿಯಾಗಿರಬೇಕು, ಕೂಡಲಚೆನ್ನಸಂಗಮದೇವಾ.