Index   ವಚನ - 343    Search  
 
ಮನಶುದ್ಧವಾಗಿ ಮಜ್ಜನಕ್ಕೆರೆದರೆ ಭಾವ ಮತ್ತೇಕಯ್ಯಾ? ಪತ್ರ ಪುಷ್ಪ ರಂಗವಲ್ಲಿಯನಿಕ್ಕಲೇನು, ಭಿತ್ತಿಯ ಚಿತ್ತಾರವೆ? ಅವರು ಕಾಣಬೇಕು, ಇವರು ಕಾಣಬೇಕೆಂಬ ಭ್ರಮೆಯ ಭ್ರಮಿತರು ಅಂಗಹೀನರು. ಮನದಂಗವನಗಲರು, ಲಿಂಗ ಮತ್ತೆಲ್ಲಿಯದೋ ? ಸದಮದವಳಿದು ನಿಜವನರಿದಡೆ ಲಿಂಗಕ್ಕೆ ಪೂಜೆ ಕಂಡಾ, ಕೂಡಲಚೆನ್ನಸಂಗಯ್ಯ ಸಾಹಿತ್ಯನಾಗಿಹನು.