Index   ವಚನ - 344    Search  
 
ಕಾಯದಿಂದ ಲಿಂಗೈಕ್ಯವಾವೆಂಬರು, ಜೀವದಿಂದ ಲಿಂಗೈಕ್ಯವಾವೆಂಬರು. ಸುಷುಮ್ನನಾಳದ ಭೇದವನರಿಯರು. ವಿಷಯದಲ್ಲಿ ಗಸಣಿಗೊಂಬರು, ಅಂತರಂಗಶುದ್ಧಿಯನವರೆತ್ತಬಲ್ಲರು, ಕೂಡಲಚೆನ್ನಸಂಗಮದೇವಾ?