Index   ವಚನ - 350    Search  
 
ಮುನ್ನಿನ ಆದ್ಯರ ವಚನ: ಲಿಂಗದ ನಡೆ, ಲಿಂಗದ ನುಡಿ-ಆ ಲಿಂಗದಂತೆ. ಮುನ್ನಿನ ಜಂಗಮದ ನಡೆ, ಜಂಗಮದ ನುಡಿ, ಆ ಜಂಗಮದಂತೆ. ಮುನ್ನಿನ ಪ್ರಸಾದದ ನಡೆ, ಪ್ರಸಾದದ ನುಡಿ ಆ ಪ್ರಸಾದದಂತೆ. ಇಂತಿವಕ್ಕನುಸಾರಿ ಮಾಡಿಹೆನೆಂಬ ಕರ್ಮಿಯ ಮಾತ ಕೇಳಲಾಗದು, ಹೊಂಬಿತ್ತಾಳೆಯ ಕೆಲಸದಂತೆ. ಲಿಂಗಾನುಭಾವಿಗಳು ಕೇಳಿದರೆ ಛಿಃ! ಇವನ ಮುಟ್ಟಲಾಗದೆಂಬರು, ಓಡ ಹಿಡಿದಡೆ ಕೈ ಮಸಿಯಾದೂದೆಂದು. ಸಿಂಹದ ನಡುವಿಂಗೆ ನಾಯ ನಡು ಸರಿಯೆಂಬ ಪಂಚಮಹಾಪಾತಕರ ನುಡಿಯ ಕೇಳಲಾಗದು, ಕೂಡಲಚೆನ್ನಸಂಗಮದೇವಾ.