Index   ವಚನ - 356    Search  
 
ಮಾತಿನ ಮಾತಿನ ಗೀತಾಂಗದಲ್ಲಿ ಸುಜಾಣನಾಗಲಹುದು. ಶ್ರೋತ್ರಶೋಭೆ ಪ್ರಜ್ಞಾಪ್ರವೀಣತೆಯಲ್ಲಿ ಶಾಸ್ತ್ರಿಕನಾಗಲಹುದು. ಅಂತರಂಗ ಬಹಿರಂಗವನಂತವ ಕಾಣಬಹುದು. ಅಂತರಾಗಮ, ಗಣಿತಗುಣಿತ ಶ್ರುತಿ ಸ್ಮೃತಿಗತರ್ಕ್ಯನಾಗಿರಬಹುದು. ಭೂತವಿಕಾರದ ಪ್ರಕೃತಿಸ್ವಭಾವ ಭ್ರಾಂತಳಿದಿರಬಹುದು. ಕಾಂತಾರತಿಗುಣವರ್ಜಿತ ಸನ್ಯಾಸಿ, ಕ್ಷೇತ್ರವಾಸಿಗಳಾಗಿರಬಹುದು. ಎನ್ನೊಡೆಯ ಕೂಡಲಚೆನ್ನಸಂಗಮದೇವನ ನಚ್ಚಿನ ಮಚ್ಚಿನ ಇಚ್ಛಾವಶ[ವರ್ತಿ]ಯಾಗಿರಬಾರದು ಲಿಂಗಾನುಭಾವವಿಲ್ಲದೆ.