Index   ವಚನ - 363    Search  
 
ಪ್ರಾಣದಿಂದ ಲಿಂಗ ಹಿಂಗಲಾಗದಯ್ಯಾ, ಧನದಿಂದ ಜಂಗಮ ಹಿಂಗಲಾಗದಯ್ಯಾ, ಕಾಯದಿಂದ ಪ್ರಸಾದ ಹಿಂಗಲಾಗದಯ್ಯಾ. ಈ ತ್ರಿವಿಧವ ತ್ರಿವಿಧದಲ್ಲಿ ನೆಲೆಗೊಳಿಸದಿದ್ದರೆ ಭಕ್ತನಲ್ಲ ಭವಿ, ಕೂಡಲಚೆನ್ನಸಂಗಯ್ಯಾ.