Index   ವಚನ - 380    Search  
 
ಉತ್ತಮಾಂಗದಲ್ಲಿ ಲಿಂಗವ ಧರಿಸಿದ ಬಳಿಕ ಧರೆಗೊರಗಲಾಗದು, ಮಾನವರ ಬೇಡಲಾಗದು, ಹಸಿವು ತೃಷೆ ವ್ಯಸನಂಗಳು ಲಿಂಗದಲ್ಲಿ ನಿಕ್ಷೇಪವಾಗಬೇಕು. ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಲಿಂಗದ ನಿಲುಕಡೆಯನರಿದು ತೆರಹಿಲ್ಲದಿರಬೇಕು, ಕೂಡಲಚೆನ್ನಸಂಗಮದೇವಾ.