Index   ವಚನ - 385    Search  
 
ಕಾಯಾನುಭಾವಿಗಳು ಕಾಯದಲೆ ಮುಕ್ತರು. ಜೀವಾನುಭಾವಿಗಳು ಜೀವದಲೆ ಮುಕ್ತರು. ಪ್ರಾಣಾನುಭಾವಿಗಳು ಪ್ರಾಣದಲೆ ಮುಕ್ತರು. ಪವನಾನುಭಾವಿಗಳು ಪವನದಲೆ ಮುಕ್ತರು. ಇವರನೆಂತು ಸರಿಯೆಂಬೆ, ಲಿಂಗಾನುಭಾವಿಗಳಿಗೆ? ಸ್ವಯಂಪ್ರಕಾಶಲಿಂಗದಲ್ಲಿ ಸದಾಸನ್ನಿಹಿತ, ಕೂಡಲಚೆನ್ನಸಂಗಯ್ಯ, ನಿಮ್ಮ ಶರಣ.