Index   ವಚನ - 405    Search  
 
ಅಕಾಯಮುಖದಲ್ಲಿ ಸಕಾಯ ಪ್ರತಿಬಿಂಬಿಸೂದು. ಸಕಾಯಮುಖದಲ್ಲಿ ಅಕಾಯ ಪ್ರತಿಬಿಂಬಿಸೂದು. ಸೋಂಕಿಲ್ಲದೆ ಸೊಗಸಿಲ್ಲದೆ ಹೂಣಿ ಹೋಗುವನು, ಅನುಭಾವ ಸಕಾಯವಾಗಿ, "ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ" ಎಂದುದಾಗಿ ಕೂಡಲಚೆನ್ನಸಂಗಾ. ನಿಮ್ಮ ಘನತೆಯ ಶರಣನೆ ಬಲ್ಲ .