Index   ವಚನ - 406    Search  
 
ಅಂಗದಲಾಯತಲಿಂಗ ಸಾಹಿತ್ಯನಾಗಿದ್ದೆ ನಾನು. ಪರಮಸುಖಪರಿಣಾಮದೊಳಿದ್ದೆ ನಾನು. "ತಸ್ಮೈ ಸರ್ವಾನುಭಾವೇನ ಶಿವಲಿಂಗಾಂತರೇ ದ್ವಯಮ್ ಸ್ವಾನುಭೂತೌ ನಿವಿಷ್ಟಾಯ ಪ್ರಸನ್ನಃ ಸ್ಯಾತ್ ಸದಾಶಿವಃ" ಸ್ಥಾವರ ಜಂಗಮ ಉಭಯವೊಂದಾಗಿ ಬೇರೆ ಭಿನ್ನಭಾವವ ವಿಚಾರಿಸಲಿಲ್ಲ. ಕೂಡಲಚೆನ್ನಸಂಗನಲ್ಲಿ ಸ್ವಾಯತವಾಗಿದ್ದ ಸಹಜ.