Index   ವಚನ - 407    Search  
 
ಲಿಂಗವೆ ಪ್ರಾಣವಾಯಿತ್ತಾಗಿ ಆಚಾರವಿಲ್ಲಯ್ಯಾ, ಪ್ರಸಾದವೆ ಕಾಯವಾಯಿತ್ತಾಗಿ ರಜ ತಮ ಸತ್ವ ಕ್ರೋಧವಿಲ್ಲಯ್ಯಾ. ಜಂಗಮಮುಖ ಲಿಂಗವಾದ ಕಾರಣ ಲಿಂಗದಲನುಭಾವಿಸಿ ನೋಡುತ್ತಿದ್ದೆನಯ್ಯಾ. ಭಕ್ತಕಾಯ ಮಮಕಾಯವಾಗಿ ಕೂಡಲಚೆನ್ನಸಂಗನಲ್ಲಿ ಸುಖಿಯಾಗಿದ್ದೆ ನಾನಯ್ಯಾ.