Index   ವಚನ - 413    Search  
 
ಲಿಂಗೈಕ್ಯರೆಂಬರು, ತ್ರಿಪುರಮರ್ದನವರಿಯರು. ಲಿಂಗವಂತರೆಂಬರು, ಕಾಮದಹನವ ಮಾಡಲರಿಯರು. ಪ್ರಾಣಲಿಂಗಿಗಳೆಂಬರು, ಹರಿಯ ನಷ್ಟವನರಿಯರು. ಲಿಂಗಪ್ರಾಣಿಗಳೆಂಬರು ಬ್ರಹ್ಮನ ಕೊಲಲರಿಯರು. ಇಂತಪ್ಪ ಶಬ್ದಸೂತಕಿಗಳ ಕಂಡು ಕೂಡಲಚೆನ್ನಸಂಗನಲ್ಲಿ ನಾಚಿತ್ತೆನ್ನ ಮನವು.