Index   ವಚನ - 427    Search  
 
ತೆರಹಿಲ್ಲದ ಲಿಂಗಭರಿತನೆಂದು ನಾಮವಿಡಿದು ಪೂಜಿಸಿ, ಮರಳಿ ಬಿದ್ದಿತ್ತೆಂಬ ನಾಚಿಕೆಯ ನೋಡಾ. ಅರಿಯರರಿಯರು ಪ್ರಾಣಲಿಂಗದ ನೆಲೆಯನು, ಅರಿದರಿದು ಕುರುಹಿಂಗೆ ವೇಳೆಯ ಮಾಡುವ ಮತಿಭ್ರಷ್ಟರು. ಅರಿದರಿದು ಸಯವಾದ ಲಿಂಗ ಓಸರಿಸಿತ್ತೆಂದು ಸಾವ ವ್ರತಗೇಡಿಗಳನೊಲ್ಲ ಕೂಡಲಚೆನ್ನಸಂಗಮದೇವ.