Index   ವಚನ - 428    Search  
 
ಭಾಷೆ ತಪ್ಪಿದ ತನುವಿಂಗಲಗ ಕಿತ್ತರೆ ಲಿಂಗ ಓಸರಿಸುವ, ಮುಂದೆ ವೀರನಪ್ಪ. ಇಂಥ ಭಾಷೆವಂತನೆ ಶರಣ? ಕಾಲಕಲ್ಪಿತನಲ್ಲ, ಪೂರ್ವಾಶ್ರಯವಿಲ್ಲ, ಉಭಯಕುಳರಹಿತ ಕೂಡಲಚೆನ್ನಸಂಗಾ ನಿಮ್ಮ ಶರಣ.