Index   ವಚನ - 433    Search  
 
ಪ್ರಾಣಲಿಂಗ ಪ್ರಸಾದ ಎಲ್ಲಾ ಎಡೆಯಲೂ ಉಂಟು. ಲಿಂಗಪ್ರಾಣಪ್ರಸಾದವಪೂರ್ವ ನೋಡಯ್ಯಾ. ಪ್ರಾಣಲಿಂಗಪ್ರಸಾದಿ ದೇಹಧರ್ಮಿ. ಲಿಂಗಪ್ರಾಣಪ್ರಸಾದಿ ಲಿಂಗಭೋಗೋಪಭೋಗಿ ಕೂಡಲಚೆನ್ನಸಂಗನಲ್ಲಿ.