ಕಾಲು ಮುಟ್ಟಿದ ಪದಾರ್ಥ ಕಾಲಲಿಂಗರ್ಪಿತ,
ಕೈಮುಟ್ಟಿದ ಪದಾರ್ಥ ಕೈಲಿಂಗಾರ್ಪಿತ,
ತನು ಮುಟ್ಟಿದ ಪದಾರ್ಥ ತನುಲಿಂಗಾರ್ಪಿತ,
ಮನ ಮುಟ್ಟಿದ ಪದಾರ್ಥ ಮನಲಿಂಗಾರ್ಪಿತ,
ಕಾಲು ಕೈ ತನು ಮನ ಮುಟ್ಟದ
ಪದಾರ್ಥ ಭೂಮಿಯ ಮೇಲಿಲ್ಲ.
ಕೊಟ್ಟುದ ಕೊಳಬಾರದು, ಕೊಡದೆ ಕೊಳಬಾರದು.
ಇದು ಕಾರಣ ಕೂಡಲಚೆನ್ನಸಂಗಯ್ಯಾ
ಗುರು ಕೊಟ್ಟ ಲಿಂಗವು ಕುರುಹಿನ ಲಿಂಗವು.
Art
Manuscript
Music Courtesy:
Video
TransliterationKālu muṭṭida padārtha kālaliṅgarpita,
kaimuṭṭida padārtha kailiṅgārpita,
tanu muṭṭida padārtha tanuliṅgārpita,
mana muṭṭida padārtha manaliṅgārpita,
kālu kai tanu mana muṭṭada
padārtha bhūmiya mēlilla.
Koṭṭuda koḷabāradu, koḍade koḷabāradu.
Idu kāraṇa kūḍalacennasaṅgayyā
guru koṭṭa liṅgavu kuruhina liṅgavu.