Index   ವಚನ - 447    Search  
 
ಲಿಂಗದ ಘನವನರಿದೆನೆಂದರೆ ಅದೆ ಕುಚಿತ್ತ. ಜಂಗಮದ ಘನವನರಿದೆನೆಂದರೆ ಅದೆ ಕುಚಿತ್ತ. ಪ್ರಸಾದದ ಘನವನರಿದೆನೆಂದರೆ ಅದೆ ಕುಚಿತ್ತ. ಗುರುಲಿಂಗಜಂಗಮದಲೊದಗಿದ ಪ್ರಸಾದ ಘನಕ್ಕೆ ಘನ, ಮನವೇದ್ಯವೆಂದು ತೋರಿದನೆನ್ನ ಗುರುಲಿಂಗ, ಕೂಡಲಚೆನ್ನಸಂಗಯ್ಯನ ಶರಣ ಬಸವಣ್ಣ.