Index   ವಚನ - 452    Search  
 
ದೇಹ ಪ್ರಸಾದವೆಂದೆನ್ನೆ, ಅಂತರ್ದೇಹ ಪ್ರಸಾದವೆಂದೆಂಬೆ. ಜಾಗ್ರ ಪ್ರಸಾದವೆಂದೆನ್ನೆ, ಸ್ವಪ್ನ ಪ್ರಸಾದವೆಂದೆಂಬೆ, ಅಂತರ್ದೇಹಕ್ಕೆ ಆಕಾರವಿಲ್ಲ, ಸ್ವಪ್ನಕ್ಕೆ ಬೀಜವಿಲ್ಲ. ಇದು ಕಾರಣ, ಕೂಡಲಚೆನ್ನಸಂಗ ತೋರಿದನಾಗಿ ಅಕಾಯದಲ್ಲಿ ಮಹಾಘನಪ್ರಸಾದಿ.