Index   ವಚನ - 460    Search  
 
ಆಲಸ್ಯವಿಲ್ಲದೆ ಲಿಂಗಲೀಯ ಮಾಡಿ ಲಿಂಗಸಂಗಸಾರಾಯ ಸುಸಂಗಿಗಲ್ಲದೆ ವೇದಿಸದಯ್ಯಾ. ಲಿಂಗಾನುಭಾವಿ ಶರಣನು ಲಿಂಗದಲ್ಲಿ ನಿರುತನಾಗಿದ್ದ ನೋಡಾ. ಜಂಗಮಸಾಹಿತ್ಯ ಪ್ರಸಾದದಲ್ಲಿ ಭರಿತ ನೋಡಾ, ಕೂಡೆ ಪ್ರಸಾದಿ, ಕೂಡಲಚೆನ್ನಸಂಗಾ ನಿಮ್ಮ ಶರಣ.