Index   ವಚನ - 461    Search  
 
ಪಾದ ಬಾಹು ಮೊದಲಾಗಿ ಎಲ್ಲ ಪ್ರಸಾದಿಯಾಗಿರಬೇಕು. ಖೇಚರಭೇದದಿಂದ ಗೂಢ ಪ್ರಸಾದಿಯಾಗಿರಬೇಕು. 'ಶಯನಾನ್ಯಂ ನ ಚರೇತ್' ಪ್ರಸಾದಿಯಾಗಿರಬೇಕು. 'ನಾಸಿಕಾನ್ಯಂ ನ ಚರೇತ್' ಪ್ರಸಾದಿಯಾಗಿರಬೇಕು. 'ಕರ್ಣಾನ್ಯಂ ನ ಚರೇತ್' ಪ್ರಸಾದಿಯಾಗಿರಬೇಕು. 'ನೇತ್ರಾನ್ಯಂ ನ ಚರೇತ್' ಪ್ರಸಾದಿಯಾಗಿರಬೇಕು. 'ಜಿಹ್ವಾನ್ಯಂ ನ ಚರೇತ್' ಪ್ರಸಾದಿಯಾಗಿರಬೇಕು. "ಆರೋಹಿತಾವರೋಹಿತಾನ್ಯಂ ನ ಚರೇತ್" ಪ್ರಸಾದಿಯಾಗಿರಬೇಕು. ಇದು ಕಾರಣ ಕೂಡಲಚೆನ್ನಸಂಗಯ್ಯನ ಪ್ರಸಾದಿಯ ಪ್ರಸಾದದಿಂದ ಬದುಕಿದೆನು.