Index   ವಚನ - 462    Search  
 
ತನುವೇ ಭಾಂಡವಾಗಿ, ಮನವೇ ಸುಯಿದಾನವಾಗಿ ಜ್ಞಾನಾಗ್ನಿಯಲೇ ಪದಾರ್ಥವ ಮಾಡೆ, ಶ್ರೋತ್ರ ನೇತ್ರ ಘ್ರಾಣ ಜಿಹ್ವೆ ಸ್ಪರ್ಶಮೂರ್ತಿಯು ನೀನೆ. ನಿನ್ನ ಪ್ರಸಾದಕ್ಕೆ ನಮೋ ನಮೋಯೆಂಬೆ ಕೂಡಲಚೆನ್ನಸಂಗಮದೇವಾ.