Index   ವಚನ - 465    Search  
 
ಪ್ರಸಾದ ಪ್ರಸಾದವೆಂಬರು ಪ್ರಸಾದದ ಕುಳವೆಂತಿಪ್ಪುದೆಂದರೆ: ಕೊಟ್ಟವ ಗುರುವಲ್ಲ, ಕೊಂಡವ ಶಿಷ್ಯನಲ್ಲ, ಅಂಜಿಕೆಯಿಂದ ಕೊಂಡುದು ಎಂಜಲ ಪ್ರಸಾದ, ಅದೆಂತೆಂದರೆ: ಈಡಾಪಿಂಗಳನಾಳಮಂ ಕಟ್ಟಿ, ಸುಷುಮ್ನಾನಾಳದಲ್ಲಿ ಇಪ್ಪ ಪ್ರಾಣವೆಂಬ ಪರಿಚಾರಕನ ಕೈಯಿಂದ ಅಗ್ನಿಯೆಂಬ ಸುವ್ವಾರನನೆಬ್ಬಿಸಲು, ಮಸ್ತಕದಲ್ಲಿ ಇದ್ದ ಉತ್ತಮ ಪ್ರಸಾದವ ತಾಗಲೊಡನೆ ಆ ಉತ್ತಮಪ್ರಸಾದ ಉದರಕ್ಕಿಳಿದು ಬಪ್ಪಲ್ಲಿ ಮನವೆಂಬ ಪ್ರಸಾದಿ ಮುಯ್ಯಾಂತು ಕೊಂಡು ಭೋಗಿಸ ಬಲ್ಲರೆ ಅದೆ ಅಚ್ಚ ಪ್ರಸಾದಿ ನಿತ್ಯಪ್ರಸಾದಿ. ಅದಲ್ಲದೆ, ಧನವುಳ್ಳವರ ಕಂಡು ಬೋಧಿಸಿ ಬೋಧಿಸಿಕೊಂಬ ಪ್ರಸಾದಿಗಳ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?