Index   ವಚನ - 475    Search  
 
ಒಂದೆಂಬೆನೆ? ಆಕಾರವಿಲ್ಲ ಎರಡೆಂಬೆನೆ? ದರ್ಶನ ನಿರ್ಣಯವಾಗದು. ಮೂರೆಂಬೆನೆ? ಮೂರ್ತಿಯಾಗಿ ತೋರದು. ಸಗುಣ ನಿರ್ಗುಣ, ಸ್ಥೂಲ ಸೂಕ್ಷ್ಮವಾದುದು, ಅಲ್ಲದುದೇನಯ್ಯಾ? ಕೂಡಲಚೆನ್ನಸಂಗಯ್ಯಾ, ದರ್ಪಣದೊಳಗಣ ಪ್ರತಿಬಿಂಬದಂತೆ ಭಿನ್ನದಲರಸೂದೇನಯ್ಯಾ ?