Index   ವಚನ - 476    Search  
 
ನೋಡುವ ನೋಟ ನೀವೆಂದರಿದೆ, ಕೇಳುವ ಶ್ರೋತ್ರ ನೀವೆಂದರಿದೆ, ವಾಸಿಸುವ ಘ್ರಾಣ ನೀವೆಂದರಿದೆ, ಮುಟ್ಟುವ ಸ್ಪರ್ಶನ ನೀವೆಂದರಿದೆ, ರುಚಿಸುವ ಜಿಹ್ವೆ ನೀವೆಂದರಿದೆ, ಎನ್ನ ಕರಣಂಗಳು ನಿಮ್ಮ ಕಿರಣಂಗಳಾಗಿ. ಕೂಡಲಚೆನ್ನಸಂಗಯ್ಯಾ ನಾ ನಿಮ್ಮ ಬೇಡಲಿಲ್ಲ, ನೀ ಕೂರ್ತು ಕೊಡಲಿಲ್ಲಾಗಿ.