Index   ವಚನ - 477    Search  
 
ಲಿಂಗ ಮುಂತಾಗಿಯೇ ನಡೆವನು ಶರಣನು, ಲಿಂಗ ಮುಂತಾಗಿಯೇ ನುಡಿವನು ಶರಣನು, ಲಿಂಗ ಮುಂತಾಗಿಯೇ ತೃಪ್ತನು ಶರಣನು, ಲಿಂಗಕಾಯ ಶರಣ, ಶರಣಕಾಯ ಲಿಂಗ. ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ ಸರ್ವಾಂಗ ಲಿಂಗಿ.