Index   ವಚನ - 485    Search  
 
ಅಮಳಸಿಂಹಾಸನವನಿಕ್ಕಿ ಪದುಮದೋವರಿಯಲ್ಲಿ ಹದುಳ ಕುಳ್ಳಿರಿಸುವೆನಯ್ಯಾ. ಜ್ಞಾನ ಜ್ಯೋತಿಯ ಬೆಳಗಿನಲ್ಲಿ ಎಡೆಯಾಡು ಶಿವನೆ! ರುದ್ರಭೂಮಿಗೆ ಎಡೆಯಾಡದಿರು ಹರನೆ! ಹಡೆದ ತಾಯಿ ತಂದೆ ಮುನ್ನಿಲ್ಲ, ಹುಟ್ಟದ ಶಿಶು, ಮೂಲ ಕಡುದೇಶಿಗನಯ್ಯಾ, ನಮ್ಮ ಕೂಡಲಚೆನ್ನಸಂಗಮದೇವ.