Index   ವಚನ - 507    Search  
 
ಪೂಜಿಸುವನ್ನಕ್ಕ ಫಲದಾಯಕ ಕಂಡಾ, ಸಹಜಸಂಬಂಧದನುವು ಹುಟ್ಟದನ್ನಕ್ಕ ಎರವೆಂದೆನಿಸೂದು. ಗಮನ ನಿರ್ಗಮನವಾಗದನ್ನಕ್ಕ, ಆಶೆಯಾಮಿಷವಳಿಯದನ್ನಕ್ಕ ಭಕ್ತಿ ಮತ್ತೆಲ್ಲಿಯದೊ? ಘಟದೊಳಗೆ ದಿಟವಾಗಿದ್ದ ಪಂಚೈದುಭೂತವಳಿಯದೆ ಕೂಡಲಚೆನ್ನಸಂಗನಲ್ಲಿ ಶರಣರೆನಿಸಿಕೊಳಲೆಂತುಬಹುದು?