Index   ವಚನ - 519    Search  
 
ಭಕ್ತ ಜಂಗಮದ ನುಡಿಗಡಣದ ಮೇಳಾಪವೆಂತಿರಬೇಕೆಂದರೆ: ಪ್ರಚ್ಛನ್ನವಾಗಿ ಲೋಕಕ್ಕೆ ಅದೃಶ್ಯವಾಗಿರಬೇಕು, ಜಲಚರನ ಪಾದಪಥದಂತಿರಬೇಕು, ಶಿಶುಕಂಡ ಕನಸಿನಂತಿರಬೇಕು, ಮೌನಿಯುಂಡ ರುಚಿಯಂತಿರಬೇಕು, ಶಿವಾಚಾರಕ್ಕೆ ಇದು ಚಿಹ್ನ. ಅಂತಲ್ಲದೆ ಹಗರಣದ ವಾದ್ಯದಂತೆ ನಗೆಗೆಡೆಯಾಗಿರುತಿಪ್ಪರು. ಹೇಮದೊರೆಯ ಮೃತ್ತಿಕೆಯಲೆತ್ತಿದಂತೆ, ಭೇರುಂಡ ಬಾಯಿವಡೆದಿಪ್ಪವರ ಭಕ್ತರೆಂತೆಂಬೆ? ಜಂಗಮವೆಂತೆಂಬೆ? ಕೂಡಲಚೆನ್ನಸಂಗಮದೇವಾ.