Index   ವಚನ - 525    Search  
 
ಹುಟ್ಟಿದ ಕುಳಸ್ಥಲವನರಿದು, ಕಾಮಕ್ರೋಧವನಳಿದು, ಸತ್ತ್ವರಜತಮವನೊತ್ತಿ ನಿಂದಲ್ಲಿ, ಸಹಜ ನೆಲೆಗೊಂಬುದು. ಮನದಂತುವನರಿದು, ಜೀವದ ಹೋಹ ನೆಲೆಯ ಬಲ್ಲರೆ ಕೂಡಲಚೆನ್ನಸಂಗನಲ್ಲಿ ಮಹಂತರೆನಿಸುವರು.