Index   ವಚನ - 526    Search  
 
ತಾಳು ಬೋಳು ಕಪ್ಪರಾದಿಗಳೆಂಬರು, ತಾಳಾವುದು, ಬೋಳಾವುದು, ಕಪ್ಪರವಾವುದೆಂದರಿಯರು. ಕಾಯದ ಕಳವಳದ ಗುಣವ ತಾಳಬಲ್ಲರೆ ತಾಳು, ಸಂಸಾರ ವಿಷಯವ ಬೋಳಿಸ ಬಲ್ಲರೆ ಬೋಳು, ಪರದಲ್ಲಿ ಪರಿಣಾಮಿಸಬಲ್ಲರೆ ಕಪ್ಪರ. ಅಂತಲ್ಲದಿದ್ದರೆ ಕೂಡಲಚೆನ್ನಸಂಗಮದೇವರಲ್ಲಿ ಡೊಂಬರ ಬೋಳು.