Index   ವಚನ - 527    Search  
 
ಆಚಾರ ಕಪ್ಪರವೊಂದು, ವಿಚಾರ ಕಪ್ಪರವೊಂದು, ಅವಿಚಾರ ಕಪ್ಪರವೊಂದು. ಇಂತು ಮೂರು ಕಪ್ಪರವೊಳವು. ಆಚಾರ ಕಪ್ಪರವ ಜಾಡ್ಯವೆಂಬೆ, ವಿಚಾರ ಕಪ್ಪರವ ಹೆಳವನೆಂಬೆ, ಅವಿಚಾರ ಕಪ್ಪರ ಸೊಮ್ಮುಸಂಬಂಧವ ತೋರಿ ಬೇಡದಾಗಿ ನಿರುಪಾಧಿಕವಯ್ಯಾ ಕೂಡಲಚೆನ್ನಸಂಗಮದೇವಾ.