ಆದಿಸ್ಥಲವೆಂದು ನುಡಿವರು,
ಅನಾದಿಸ್ಥಲವೆಂದು ನುಡಿವರು,
ಆದಿಗೆ ಒಡಲುಂಟು, ಅನಾದಿಗೆ ಒಡಲಿಲ್ಲ.
"ನ ಚ ಭೂಮಿರ್ನ ಚ ಜಲಂ ನ ಚ ತೇಜೋ
ನ ಚ ವಾಯುಃ ನ ಚಾಕಾಶಃ"
ಇವೆಲ್ಲವೂ ಘಟಕ್ಕೆ ಸಂಬಂಧವಾಗಿ ಘಟ ಕೆಡುವುದು.
ಇಂಥ ನಿರ್ದೇಹಿ ಶರಣಂಗಲ್ಲದೆ ಅರಿಯಬಾರದು,
ಕೂಡಲಚೆನ್ನಸಂಗಯ್ಯಾ
Art
Manuscript
Music Courtesy:
Video
TransliterationĀdisthalavendu nuḍivaru,
anādisthalavendu nuḍivaru,
ādige oḍaluṇṭu, anādige oḍalilla.
Na ca bhūmirna ca jalaṁ na ca tējō
na ca vāyuḥ na cākāśaḥ
ivellavū ghaṭakke sambandhavāgi ghaṭa keḍuvudu.
Intha nirdēhi śaraṇaṅgallade ariyabāradu,
kūḍalacennasaṅgayyā