Index   ವಚನ - 571    Search  
 
ಶರಣಸತಿ ಲಿಂಗಪತಿಯೆಂಬ ಉಭಯ ಸಂದು ಬಿಡದು, ಮಜ್ಜನವ ಮಾಡುವರಯ್ಯಾ. ಪ್ರಾಣಲಿಂಗಕ್ಕೆಂದರ್ಪಿಸುವರು, ಮತ್ತೆ ಲಿಂಗಜಂಗಮಪ್ರಸಾದವೆಂದೆಂಬರು ಇಂತಪ್ಪ ಸಂದೇಹವುಳ್ಳನ್ನಕ್ಕ ಐಕ್ಯರೆಂತಪ್ಪರಯ್ಯಾ? ಈ ಸಂಕಲ್ಪ ವಿಕಲ್ಪವೆಂಬ ಸಂದೇಹವ ಕಳೆದುಳಿದ ಕೂಡಲಚೆನ್ನಸಂಗಾ ನಿಮ್ಮ ಶರಣ.